ಕನ್ನಡ ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ: ವೈಯಕ್ತಿಕ ಮತ್ತು ಹಣಕಾಸು ಸಂಕಷ್ಟಗಳಿಗೆ ಬಲಿಯಾದ ಪ್ರತಿಭೆ. 

ಜನಪ್ರಿಯ ನಿರ್ದೇಶಕ, ನಟ ಗುರುಪ್ರಸಾದ್ ಅವರು ಮಾದನಾಯಕನಹಳ್ಳಿಯ ತಮ್ಮ ಅಪಾರ್ಟ್ಮೆಂಟ್‌ನಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆರ್ಥಿಕ ಒತ್ತಡಗಳು ಮತ್ತು ವೈಯಕ್ತಿಕ ಸಂಕಷ್ಟಗಳು ಅವರ ಮೇಲೆ ತುಂಬಾ ಪ್ರಭಾವ  ಬೀರಿದ್ದವು ಎನ್ನಲಾಗುತ್ತಿದೆ.

ನಿರ್ದೇಶಕ ಮತ್ತು ನಟ ಗುರುಪ್ರಸಾದ್ ಅವರ ಈ ಸಾವು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ ನೀಡಿದಂತಾಗಿದೆ. 52 ವರ್ಷ ವಯಸ್ಸಿನ ಈ ಪ್ರತಿಭಾವಂತ ನಿರ್ದೇಶಕ ನವೆಂಬರ್ 2ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿದ್ದು, ಮಾರನೇ ದಿನ, ಜನವರಿ 3ರಂದು, ಶವವಾಗಿ ಪತ್ತೆಯಾಗಿದ್ದಾರೆ. ಇವರ ಮೃತದೇಹವು ತೀವ್ರ ದುರ್ವಾಸನೆ ಬರುತ್ತಿಂದ್ದರಿಂದ ಪ್ರಾಣ ಹೋಗಿ ತುಂಬಾ ಸಮಯವೇ ಆಗಿರಬಹುದು ಎಂದು ಶಂಕಿಸಲಾಗಿದೆ.

 ಸಾವಿನ ಹಿಂದಿನ ಕಾರಣಗಳು: ಇತ್ತೀಚಿನ ದಿನಗಳಲ್ಲಿ, ಗುರುಪ್ರಸಾದ್ ಅವರು ಹಣಕಾಸಿನ ತೊಂದರೆಗಳಿಗೆ ಒಳಗಾಗಿದ್ದರೆಂಬುದು ವರದಿಯಾಗಿದೆ. ಇವರು ಸಾಲದ ಒತ್ತಡದಲ್ಲಿದ್ದರು ಎಂದು ಚಿತ್ರರಂಗದ ಸ್ನೇಹಿತರು ಮತ್ತು ಹಿತೈಷಿಗಳು ಈ ಬಗ್ಗೆ ಸಾಕಷ್ಟು ಹೇಳಿಕೆಗಳನ್ನು ನೀಡಿದ್ದಾರೆ. ಅವರ ಆತ್ಮೀಯ ಸ್ನೇಹಿತ ಮತ್ತು ನಟ ಜಗ್ಗೇಶ್, ಗುರುಪ್ರಸಾದ್ ಅವರ ಸಂಕಷ್ಟದ ಕುರಿತು ಮಾತನಾಡಿ, ಅವರು ಹಲವಾರು ಬಾರಿ ಸಾವಿನ ಬಗ್ಗೆ ಮಾತನಾಡುತ್ತಿದ್ದರು, ಅವರನ್ನು ಸಾಕಷ್ಟು ಬಾರಿ ಧೈರ್ಯ ತುಂಬ್ಬಿದ್ದೇನೆ ಎಂದು ಹೇಳಿದರು.

 ಮನೆ ಮತ್ತು ಕುಟುಂಬದ ಸ್ಥಿತಿ: ಗುರುಪ್ರಸಾದ್ ಅವರು ಇತ್ತೀಚೆಗೆ ವಿವಾಹವಾಗಿದ್ದು, ಕಳೆದ 8 ತಿಂಗಳಿಂದ ಟಾಟಾ ನ್ಯೂ ಹೇವನ್ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಆತ್ಮಹತ್ಯೆಗೆ ಶರಣಾದ ಕಾರಣವನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗುತ್ತಿದೆ. ಪ್ರಾಥಮಿಕ ವರದಿಗಳು ಇವರ ಆತ್ಮಹತ್ಯೆಗೆ ಆರ್ಥಿಕ ಸಂಕಷ್ಟ ಮತ್ತು ವೈಯಕ್ತಿಕ ಸಮಸ್ಯೆಗಳೇ ಕಾರಣವೆಂದು ಸೂಚಿಸುತ್ತಿವೆ.

ಚಲನಚಿತ್ರ ಕ್ಷೇತ್ರದಲ್ಲಿ ಗುರುಪ್ರಸಾದ್: ಮಠ ಮತ್ತು ಎದ್ದೇಳು ಮಂಜುನಾಥ ಮುಂತಾದ ಚಲನಚಿತ್ರಗಳ ಮೂಲಕ ಗುರುಪ್ರಸಾದ್ ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ನಿರ್ದೇಶಕರಾಗಿ ಬೆಳೆದು ಬಂದವರು. ಅವರ ಯೋಚನಾ ಕಥಾಹಂದರ ವಿವರಣೆ ಮತ್ತು ವ್ಯಂಗ್ಯಾತ್ಮಕ ಚಿತ್ರಣಗಳು ಜನರನ್ನು ಆಕರ್ಷಿಸಿದ್ದು, ಕನ್ನಡ ರಾಜ್ಯ ಪ್ರಶಸ್ತಿಗೂ ಪಾತ್ರರಾಗಿದ್ದರು. ಆದರೆ ರಂಗನಾಯಕ ಚಿತ್ರದ ಸೋಲು ಅವರಿಗೆ ಆರ್ಥಿಕ ಸಂಕಷ್ಟವನ್ನುಂಟುಮಾಡಿದ ಕಾರಣ, ಅದು ಅವರ ಮೇಲೆ ಪರಿಣಾಮ ಬೀರಿತು. ಕನ್ನಡ ಚಿತ್ರರಂಗವು ಈ ಅಪಾರ ಪ್ರತಿಭಾವಂತ ನಿರ್ದೇಶಕನ ಅಗಲಿಕೆಯನ್ನು ಸಂತಾಪದೊಂದಿಗೆ ಸ್ಮರಿಸುತ್ತಿದ್ದು, ಅವರ ಆಕಸ್ಮಿಕ ಸಾವು ಪ್ರೇಕ್ಷಕರ ಹೃದಯಕ್ಕೆ ನೋವನ್ನುಂಟುಮಾಡಿದೆ.

One thought on “ಕನ್ನಡ ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ: ವೈಯಕ್ತಿಕ ಮತ್ತು ಹಣಕಾಸು ಸಂಕಷ್ಟಗಳಿಗೆ ಬಲಿಯಾದ ಪ್ರತಿಭೆ. ”

Leave a Reply

Your email address will not be published. Required fields are marked *