ಭಗವದ್ಗೀತೆ ಎಂದ ಕೂಡಲೇ ನಮ್ಮಲ್ಲಿ ಹಲವರು ಮಹಾಭಾರತ, ಕುರುಕ್ಷೇತ್ರ ಯುದ್ಧಭೂಮಿ, ಶ್ರೀ ಕೃಷ್ಣನ ಉಪದೇಶ, ಅರ್ಜುನನ ಅಸಹಾಯಕತೆ, ಅಂತಿಮವಾಗಿ ಧರ್ಮದ ಜಯ ಎಂಬಂತೆ ಊಹಿಸಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಗೀತೆ ಎಂದರೆ ಅರ್ಥೈಸಿಕೊಳ್ಳಲು ಕಬ್ಬಿಣದ ಕಡಲೆ ಮತ್ತಷ್ಟು ಜನರಿಗೆ ವಿಸ್ತೃತ ಹದಿನೆಂಟು ಅಧ್ಯಾಯ ಮತ್ತು 700 ಶ್ಲ ೋಕದ ಮಹಾ ಗ್ರಂಥ. ಓದಲೇಬೇಕಾದ ವಿಷಯಗಳ ನಾಲ್ಕು ಪುಟವನ್ನೂ ಓದಲು ಶ್ರಮಿಸುವ ಇಂದಿನ ಯುವ ಜನರಿಗೆ, 700 ಶ್ಲ ೋಕದ ಪುಸ್ತಕ ಒಂದು ಜೀವನವಿಡಿ ಓದಲು ಅಸಾಧ್ಯವಾದ ಗ್ರಂಥ ಎಂದೆ ತಪ್ಪಾಗಿ ಭಾವಿಸಿಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿಗೀತೆ ಇಡೀ ಮನುಕುಲವನ್ನು ಉದ್ದಾರ ಮಾಡಬಲ್ಲಂತಹ ನೀತಿ ಪಾಠಗಳನ್ನು ಬೋ ಧಿಸುವ ಅತಿ ಉಪಯುಕ್ತಮತ್ತುಅತ್ಯಂತ ವೈಜ್ಞಾನಿಕ ವಿಷಯಗಳನ್ನು ಒಳಗೊ ಂಡಿರುವಂತಹ ಪುರಾತನ ಗ್ರಂಥ. ಭಗವದ್ಗೀತೆಯ ಪ್ರೇರಣೆಯೊಂದಿಗೆ ಒಬ್ಬ ವ್ಯಕ್ತಿಪರಿವರ್ತನೆಯ ಹಾದಿಯಲ್ಲಿ ಶ್ರೇಷ್ಠವ್ಯಕ್ತಿ ಆಗುವ ಸಂಶಯವೇ ಇಲ್ಲ. ಭಗವದ್ಗೀತೆಯು ಪ್ರಪಂಚದ ಅದೆಷ್ಟ ೋ ಸಾಮಾನ್ಯ ವ್ಯಕ್ತಿಗಳನ್ನು ಅತಿ ಶ್ರೇಷ್ಠಸಾಧಕರನ್ನಾಗಿ ಮಾಡುವಲ್ಲಿಮಹತ್ವದ ಪಾತ್ರವನ್ನು ವಹಿಸಿದೆ. ಇಂತಹ ಗೀತೆಯ ಸಾರವನ್ನು ಮನುಕುಲಕ್ಕೆ ಪಸರಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದುಆಗಿರುತ್ತದೆ.
ಇಂತಹ ಅಮೂಲ್ಯವಾದ ಜವಾಬ್ದಾರಿಯನ್ನು ಹೊ ತ್ತುನಗರದ ಯಲಹಂಕ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ , ಸಂಸ್ಕೃತ ವಿಭಾಗದ, “ಸಂತ್ರಯ ಸಂಸ್ಕೃತ ವಿದ್ಯಾರ್ಥಿಗಳ ವೇದಿಕೆ”, 13ನೇ ಡಿಸೆಂಬರ್ 2024 ರಂದು ಗೀತಾ ಜಯಂತಿ ಉತ್ಸವವನ್ನು ಅತಿಥಿ ಉಪನ್ಯಾಸ ಮತ್ತುವಿದ್ಯಾರ್ಥಿಗಳಿಗೆ ಅಂತರ್ ಕಾಲೇಜು ಸ್ಪರ್ಧೆಗಳ ಮುಖಾಂತರ ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರು ಡಾ. ಎಸ್ ಎನ್ ವೆಂಕಟೇಶ್, ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ರಾಮರಾವ್ ಎಸ್, ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಶ್ರೀಮತಿ ನೇತ್ರಾ ಮಿರ್ಜ, ವಿಶೇಷ ಅತಿಥಿಗಳಾದ ಯುವ ಸಾಮಾಜಿಕ ಕಾರ್ಯಕರ್ತ ಉತ್ಕರ್ಷ ಕೆ ಎಸ್, ಹಾಗೂ ಸಂಸ್ಕೃತ ವಿಭಾಗದ ವಿದ್ಯಾರ್ಥಿಗಳು ದೀಪ ಬೆಳಗುವ ಮುಖಾಂತರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿಶ್ರೀಮತಿ ನೇತ್ರಾ ಮಿರ್ಜಿ ರವರ ಸ್ವಾಗತ ಗೀತೆಯ ನಂತರ ಸ್ವಾಗತ ಭಾಷಣ ನೀಡಿದ ಪ್ರಾಂಶುಪಾಲರಾದ ಡಾ. ಎಸ್ ಎನ್ ವೆಂಕಟೇಶ್ ರವರು “ಭಗವದ್ಗೀತೆ ಎಂದೆಂದಿಗೂ ಪ್ರಸ್ತುತವಾದ ನಮ್ಮ ಸಂಸ್ಕೃತಿ ಮತ್ತುಪರಂಪರೆಯ ವಿಷಯ, ಇದರಲ್ಲಿಹೆಚ್ಚು ಅಧ್ಯಯನದ ಅಗತ್ಯವಿದೆ, ಪ್ರಸ್ತುತ ಕೇಂದ್ರ ಸರ್ಕಾರದ “ಶೋ ಧಗಂಗಾ” ಕಾರ್ಯಕ್ರಮವನ್ನು ಒಳಗೊ ಂಡಂತೆ ಹಲವಾರು ಯೋಜನೆಗಳಿಗೂ ಮುಖ್ಯವಾಗಿ ಭಗವದ್ಗೀತೆಯ ಪ್ರೇರಣೆಯನ್ನು ಕಾಣಬಹುದು” ಎಂದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ರಾಮರಾವ್ ರವರು “ಭಾರತೀಯ ಜ್ಞಾನಪರಂಪರೆಯಲ್ಲಿಭಗವದ್ಗೀತೆ ಒಂದು ಮುಖ್ಯ ಪಾತ್ರವನ್ನು ವಹಿಸುತ್ತದೆ ಇದರ ಅಧ್ಯಯನದ ಮುಖಾಂತರ ಎಲ್ಲರೂ ಸಾಧಕರಾಗಬಹುದು, ಅಲ್ಲದೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ನೀಡಿರುವಂತಹ ಪಾಠಗಳು ಅತ್ಯಮೂಲ್ಯವಾದವು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿವಿಶೇಷವಾಗಿ ಅತಿಥಿ ಉಪನ್ಯಾಸ ನೀಡಿದ ಯುವ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಉತ್ಕರ್ಷ ಕೆ ಎಸ್ ರವರು, “ನಮ್ಮ ದೇಶದ ಸಂಸ್ಕೃತಿ, ಪರಂಪರೆಯ ಮುಖವಾಣಿ ಭಗವದ್ಗೀತೆ. ಭಗವದ್ಗೀತೆಯ ಮುಖಾಂತರ ಸಾವಿರಾರು ಹೋ ರಾಟಗಾರರು ಸ್ವಾತಂತ್ರ್ಯ ಸಮರದಲ್ಲಿತಮ್ಮ ಪಾತ್ರವನ್ನು ನಿರ್ವಹಿಸಿದರು, ಪ್ರಪಂಚದ ಅತಿ ಆಧುನಿಕ ವಿಜ್ಞಾನದ ಬೇರು ಭಗವದ್ಗೀತೆಯಲ್ಲಿಅಡಗಿದೆ. ಪ್ರಪಂಚದ ಸುಪ್ರಸಿದ್ಧವಿಜ್ಞಾನಿಗಳು ಕೂಡ ಭಗವದ್ಗೀತೆಯಿಂದ ಪ್ರೇರಣೆ ಪಡೆದು ಯಶೋ ಗಾಥೆ ಹಾಡಿದರು. ಅಂತಿಮವಾಗಿ ಭಗವದ್ಗೀತೆ ಯಂತಹ ಉತ್ಕೃಷ್ಟ ಶಾಸ್ತ್ರದ ಜೊತೆ ಇಂದಿನ ಯುವ ಜನತೆಗೆ ಶಸ್ತ್ರದ ಅಗತ್ಯವೂ ಇದೆ, ಇದರ ಪ್ರೇರಣೆ ಭಗವದ್ಗೀತೆಯೇ” ಎಂದು ತಮ್ಮ ಉಪನ್ಯಾಸ ನೀಡಿದರು. ಮುಖ್ಯ ಕಾರ್ಯಕ್ರಮದನಂತರ ಸುಮಾರು 15ಕ್ಕೂ ಹೆಚ್ಚು ಕಾಲೇಜುಗಳಿಂದ, ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಭಾಗವಹಿಸಲು ಬಂದಿದ್ದವಿದ್ಯಾರ್ಥಿಗಳಿಗೆ, ಭಗವದ್ಗೀತೆ ಪಟ್ಟಣ ಸ್ಪರ್ಧೆ, “ಭಗವದ್ಗೀತೆ ಮತ್ತುಯುವಜನರ ಪ್ರೇರಣೆ” ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಹಾಗೂ “ಭಗವದ್ಗೀತೆಯ ಇಂದಿನ ಪ್ರಸ್ತುತತೆ” ಕುರಿತು ಆಶುಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.
ಆಶುಭಾಷಣ ಸ್ಪರ್ಧೆಯ ಪ್ರಥಮ ಬಹುಮಾನ ವಿಜೇತರಾದ, ರಾಮಯ್ಯ ಯುನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸ್ (RUAS) ವಿದ್ಯಾರ್ಥಿಯಾದ ಶ್ರೀ ನಾಗಾರ್ಜುನ ಪಿ ರಾವ್ ರವರು “ಕಾಲೇಜಿನ ದಿನಗಳಲ್ಲಿಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದೇನೆ, ಆದರೆ ಗೀತಾ ಜಯಂತಿ ಮುಖಾಂತರ ಏರ್ಪಡಿಸಿದ ಈ ಕಾರ್ಯಕ್ರಮದಲ್ಲಿ ವಿಜೇತನಾಗಿರುವುದು ನನಗೆ ಬಹಳ ಸಂತೋ ಷ ತಂದಿದೆ. ಭಗವದ್ಗೀತೆ ಕೇವಲ ಪ್ರಮಾಣ ಮಾಡಲು ಇರುವ ಗ್ರಂಥವಲ್ಲ, ಅದನ್ನು ಈಗಿನ ಯುವಜನರು ತೆಗೆದು ಓದಿ, ಅರ್ಥೈಸಿಕೊಂಡು, ಜೀವನದಲ್ಲಿ ಶ್ರೀಕೃಷ್ಣನ ಮಾರ್ಗದರ್ಶನದಂತೆ ನಡೆಯಬೇಕು” ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದ ಸಮಾರೋ ಪ ಸಮಾರಂಭವನ್ನು ಕಾಲೇಜಿನ ಆಂತರಿಕ ಗುಣಮಟ್ಟ ವಿಭಾಗದ ಮುಖ್ಯಸ್ಥರಾದ ಡಾ.ಎಂ ಎಲ್ ಅಶೋಕ್ ರವರು ವಿಜೇತರಿಗೆ ಬಹುಮಾನ ವಿತರಣೆಯ ಮುಖಾಂತರ ನಡೆಸಿಕೊಟ್ಟರು. “ಗೀತಾ
ಜಯಂತಿ ರೀತಿಯ ಕಾರ್ಯಕ್ರಮಗಳನ್ನು ನಡೆಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ, ಸಂಸ್ಕೃತ ವಿಭಾಗದ ವಿದ್ಯಾರ್ಥಿಗಳಿಗೆ ಹಾಗೂ ವಿಶೇಷವಾಗಿ ವಿದ್ಯಾರ್ಥಿ ಮುಖಂಡರಾದ ಸತ್ಯಸಿಂಹ ಹಾಗೂ ನಿಖಿಲ್ ಆತ್ರೇಯ ರವರಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಿ ಕೊಟ್ಟಿದ್ದಕ್ಕೆ ಶ್ಲಾಘಿಸಿದರು. ಮುಂಬರುವ ದಿನಗಳಲ್ಲಿಈ ರೀತಿಯ ಹಲವಾರು ಕಾರ್ಯಕ್ರಮಗಳನ್ನು ನಾವು ನಡೆಸಬೇಕು” ಎಂದು ಅಭಿಪ್ರಾಯಪಟ್ಟರು.