“ಜನತಾ ಸೇವಾ ಕೇಂದ್ರ” ಫ್ರಾಂಚೈಸಿ ಉದ್ಘಾಟನೆ

“ಜನತಾ ಸೇವಾ ಕೇಂದ್ರ” ಫ್ರಾಂಚೈಸಿ ಉದ್ಘಾಟನೆ ಮಾಹಾಲಕ್ಷ್ಮಿ ಲೇಔಟ್, SGECT(R), ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇಯಿತು, ಕಾರ್ಯಕ್ರಮದ  ಅಧ್ಯಕ್ಷತೆಯನ್ನು SGECT(R)ನ ಅಧ್ಯಕ್ಷರಾದ ಆರ್.ನಾಗರಾಜ ಶೆಟ್ಟಿ KAS (Retd) ರವರು ವಹಿಸಿಕೊಂಡಿದ್ದರು. ಮಾಜಿ ಶಾಸಕರು ಹಾಗೂ ಚಲನಚಿತ್ರ ನಟರು ಆದ ನೆ.ಲ.ನರೇಂದ್ರ ಬಾಬು ರವರು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಇದೇ ವೇಳೆ ಬಿ.ಕೆ.ಬಸವರಾಜು, ಎಸ್. ಮಲ್ಲೇಶ್, ಆರ್ಯನ್ ಭಾರಾದ್ವಾಜ್, ಪದ್ಮಾಕ್ಷಿ ಲೋಕೇಶ್, ಎಮ್. ಎಸ್. ಅನುರಾಧ, ಭರತ್ ಗೌಡ.ಬಿ.ಆರ್, ಅರುಣ್, ಸದಾಶಿವ, ಎಸ್.ಜಿ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ನ ಎಲ್ಲಾ ಟ್ರಸ್ಟಿಗಳು ಹಾಗೂ ಎಲ್ಲಾ ಅಜೀವ ಸದಸ್ಯರುಗಳು ಹಾಗೂ ಜನತಾ ಸೇವಾ ಕೇಂದ್ರ ಸಂಸ್ಥೆಯ ತಂಡದವರು ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ನರೇಂದ್ರ ಬಾಬು ರವರು, ಜನತಾ ಸೇವಾ ಕೇಂದ್ರದ ತಂಡವು ಒಂದೇ ಸೂರಿನಡಿಯಲ್ಲಿ ಬ್ಯುಸಿನೆಸ್ ಕನ್ಸಲ್ಟಿಂಗ್, ಡ್ಯಾಕ್ಯುಮೆಂಟೇಶನ್ ಕನ್ಸಂಲ್ಟಿಂಗ್, ಟ್ಯಾಕ್ಸ್ ಅಂಡ್ ಆಡಿಟಿಂಗ್ ಸೇವೆಗಳು, ಸಾಫ್ಟ್ ವೇರ್ ಸಂಬಂದ ಪಟ್ಟ ಸೇವೆಗಳು, ಸಾರ್ವಜನಿಕರ ಸಾಮಾನ್ಯ ದಾಖಲಾತಿಗಳ ಸೇವೆಗಳು ಸರ್ಕಾರಿ ಅಪ್ಲಿಕೇಶನ್ಗಳು ಹೀಗೆ ಹತ್ತು ಹಲವಾರು ಸೇವೆಗಳನ್ನು ಯೋಚಿಸಿ  www.janathaseva.com ಪೋರ್ಟಲ್ ನ ಮೂಲಕ ಒಂದೆಡೆ ತಂದು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಸೇವೆಗಳನ್ನು ನೀಡುತ್ತಿರುವುದನ್ನು ಶ್ಲಾಗಿಸಿದರು. ಜೊತೆಗೆ ಸ್ವಂತ ಉದ್ಯಮ ಶುರು ಮಾಡಲು ಇಚ್ಚೆ ಪಡುವವರಿಗೆ ತರಬೇತಿ ನೀಡುವ ಮೂಲಕ ಅವಕಾಶಗಳನ್ನು ಕಲ್ಪಿಸಿಕೊಡುವುದರ ಮೂಲಕ  ಮತ್ತೊಂದ್ದು ಮೈಲಿಗಲ್ಲನ್ನು ಸ್ಥಾಪಿಸಲು ಹೊರಟಿರುವಿರಿ ಎಂದು ಪ್ರೋತ್ಸಾಹಿಸಿದರು. ನಂತರ ಮಾತನಾಡಿದ ಅಧ್ಯಕ್ಷರಾದ ಆರ್.ನಾಗರಾಜ ಶೆಟ್ಟಿ KAS (Retd) ರವರು ಈಗಾಗಲೇ ಹಲವಾರು ಕೌಶಲ್ಯ ತರಬೇತಿಗಳನ್ನು ನಮ್ಮ ಅಕಾಡೆಮಿಯ ಮೂಲಕ ನೀಡುತ್ತಾ ಬಂದ್ದಿದ್ದೆವು, ಈಗ JSK ಫ್ರಾಂಚೈಸಿ ಮೂಲಕ ಹಲವಾರು ಸಾರ್ವಜನಿಕ ಸೇವೆಗಳನ್ನು ನೀಡಲು, ಹಾಗೂ  ಉದ್ಯೋಗ ಸೃಷ್ಟಿ ಮಾಡಲು ನಮಗೆ ಶಕ್ತಿ ಬಂದಂತ್ತಾಗಿದೆ ಎಂದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಮಾನ್ಯತೆಯನ್ನು ಪಡೆದ ಜ್ಙಾನ ಜ್ಯೋತಿ ಅಧ್ಯಯನ ಕೇಂದ್ರದ ಮೂಲಕ ಪಿ.ಜಿ ಇನ್ ಯೋಗ, ಡಿಪ್ಲಮೋ ಇನ್ ಯೋಗ ಕೋರ್ಸ್ ಗಳು ಕೂಡ ಲಭ್ಯವಿದ್ದು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸರ್ಟಿಫಿಕೇಟ್ ಪಡೆದು ವೃತ್ತಿಪರ ಯೋಗ ತರಬೇತುದಾರರಾಗಿ ಹಾಗೂ ಹತ್ತು ಹಲವಾರು ಅವಕಾಶಗಳು ಇದರಿಂದ ತಮಗೆ ಲಭಿಸಲಿದೆ ಎಂದು ತಿಳಿಸಿದರು. ಹಲವಾರು ಯೋಗ ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ದಾಖಲೆಗಳ ಮಹತ್ವದ ಕುರಿತಾದ ಜಾಗೃತಿ ಶಿಬಿರಕ್ಕೆ ಭಾಗಿಯಾದವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ReplyForwardAdd reaction

Leave a Reply

Your email address will not be published. Required fields are marked *