ಉಚಿತ ಯೋಗ ಡೆಮೋ – JJYSC ವತಿಯಿಂದ 

JJYC

SG ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ಟ್ (Regd) ವತಿಯಿಂದ ಆರ್ಥಿಕವಾಗಿ ಬಡ ವಿದ್ಯಾರ್ಥಿಗಳು, ಮಹಿಳೆಯರಿಗೆ ಮತ್ತು ಸಾರ್ವಜನಿಕರಿಗೆ ಶೈಕ್ಷಣಿಕ ಅಭಿವೃದ್ಧಿ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಶಾಖೆಯ ವತಿಯಿಂದ  2024-25 ಬ್ಯಾಚ್‌ಗಾಗಿ ಯೋಗ ವಿದ್ಯಾರ್ಥಿಗಳಿಗೆ ಉಚಿತ ಓರಿಯಂಟೇಶನ್ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಹಾಗೂ ಯೋಗ ತರಬೇತಿಯ ಹೊಸ ದಾಖಲಾತಿಗಳು ಪ್ರಾರಂಭವಾಗಿದ್ದು ಆಸಕ್ತರು ಕೋರ್ಸ್ಗೆ ಸೇರಿಸಕೊಳ್ಳಲು ಅವಕಾಶವಿದೆ. 

ಈ ವಿಶೇಷ ದಿನದಂದು *ಜನತಾ ಸೇವಾ ಕೇಂದ್ರ* ದ ಫ್ರ್ಯಾಂಚಾಯ್ಸ್ ಅನ್ನು ಲೋಕಾರ್ಪಣೆ ಮಾಡುತ್ತಿದ್ದು ಮತ್ತು ಕರ್ನಾಟಕದಲ್ಲಿಯೇ ಮೊತ್ತ ಮೊದಲ ಬಾರಿಗೆ 

ದಾಖಲೆಗಳ ಮಹತ್ವದ ಕುರಿತಾದ ಜಾಗೃತಿ ಶಿಬಿರವನ್ನು ಕೂಡ ಆಯೋಜಿಸಿದ್ದು, ವೃತ್ತಿಪರ ಜನತಾ ಸೇವಾ ಕೇಂದ್ರ ತಂಡವು ಇದನ್ನ ನಡೆಸಿಕೊಡಲಿದ್ದಾರೆ. ಈ ಶಿಬರದಲ್ಲಿ ಭಾಗಿಯಾಗುವವರಿಗೆ ಪ್ರಮಾಣ ಪತ್ರವನ್ನ ವಿತರಿಸಲಾಗುವುದು. ಕಾರ್ಯಕ್ರಮವನ್ನ ಉದ್ಘಾಟನೆ ಮಾಡಲು ಹಲವಾರು ಗಣ್ಯ ವ್ಯಕಿಗಳು ಈ ಕಾರ್ಯಕ್ರಮಕ್ಕೆ ಭಾಗಿಯಾಗುತ್ತಿದ್ದು  ಪ್ರೀತಿಯ ಕನ್ನಡಿಗರು ಈ ಅವಕಾಶವನ್ನು ಸದುಪಯೋಗ ಪಡಿಸಕೊಳ್ಳಬೇಕು ಎಂಬುದು  ಜ್ಞಾನ ಜ್ಯೋತಿ ಯೋಗ ಅಧ್ಯಯನ ಕೇಂದ್ರದ ಮುಖ್ಯ ಪದಾಧಿಕಾರಿಗಳ ಮನವಿ.

*ಕಾರ್ಯಕ್ರಮಕ್ಕೆ ಭಾಗವಹಿಸಲು ಇಚ್ಛೆಸುವವರಿಗೆ ನೋಂದಣಿ ಕಡ್ಡಾಯ (ಉಚಿತ)*

ಸಂಪರ್ಕಿಸಿ – ಆರ್ ನಾಗರಾಜಶೆಟ್ಟಿ KAS (Retd), President 

Jnana Jyoti Yoga Study Centre. 

ಸವಿತ – 6362363044, 9483141411.

Leave a Reply

Your email address will not be published. Required fields are marked *