ಶೇಷದ್ರಿಪುರಂ ( ಯೆಲಹಂಕ ) ಕಾಲೇಜಿನಲ್ಲಿ ಭವಿಷ್ಯದ ಉದ್ಯಮಿಗಳಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುವ ಸಲುವಾಗಿ ಆಯೋಜನೆ ಮಾಡಲಾಗಿದ್ದ “Innovate X” ಇಂಟರ್‌ಕ್ಲಾಸ್ ಸ್ಪರ್ಧೆಯನ್ನು ಕಾಲೇಜ್ ನಲ್ಲಿ “ಜನತಾ ಕ್ಲಬ್”ನ ಸಹಭಾಗಿತ್ವದಲ್ಲಿ ಆಯೋಜನೆ ಮಾಡಲಾಗಿತ್ತು.
ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ಹೊಸ Business ಆಲೋಚನೆಗಳನ್ನು ಮಂಡಿಸಿದರು.
ಕಾರ್ಯಕ್ರಮಕ್ಕೆ *ಜನತಾ ಕ್ಲಬ್ – ಉದ್ಯಮಿಗಳಿಗಾಗಿ* ಸಂಸ್ಥೆಯ ಅಧ್ಯಕ್ಷರಾದ ಆರ್ಯನ್ ಭಾರಧ್ವಜ್, ಪ್ರಸಿದ್ಧ ವೇಗನ್ ಉದ್ಯಮಿ ಮತ್ತು ಕ್ರೀಡಾಪ್ರಿಯ ಸುನಿಲ್ ಕೆ.ಜಿ., ಹಾಗೂ ಭಾರತ ಫಾರ್ ಚೇಂಜ್ನ ಕಾರ್ಯಕರ್ತರಾದ ವಿಜಯ ರಾಘವ, ಫಿಂಟೆಕ್ ಕಂಪನಿಯ ಮಾಲೀಕರಾದ ಸುಚೇಂದ್ರ ರವರು ತೀರ್ಪುಗಾರರಾಗಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ತುಂಬಾ ಉತ್ಸುಕತೆಯಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವಿದ್ಯಾರ್ಥಿಗಳಾದ ಸುಧೀರ್, ಹೀನಾಯತ್ ಮತ್ತು ತಂಡ, ತರುಣ್ ರವರು ಕ್ರಮವಾಗಿ ಬಹುಮಾನ ಗಳಿಸಿದರು. ವಿದ್ಯಾರ್ಥಿಗಳು ತಮ್ಮ ಸೃಜನಶೀಲ ಹಾಗೂ ಹೊಸತನದಿಂದ ಕೂಡಿದ ಬಿಸಿನೆಸ್ ಯೋಚನೆಗಳನ್ನು ಮಂಡಿಸಿ ಭವಿಷ್ಯದ ಉತ್ತಮ ಉದ್ಯಮಿಗಳ ಸಾಲಿನಲ್ಲಿ ಗುರುತಿಸಿಕೊಳ್ಳುವ ಭರವಸೆಯನ್ನು ಮೂಡಿಸಿದರು.
ಈ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ತಮ್ಮ ಉದ್ಯಮಶೀಲತೆಯನ್ನು ತೋರಿಸಲು ಮತ್ತು ತಮ್ಮ ಆಲೋಚನೆಗಳಿಗೆ ಮಾರ್ಗದರ್ಶನವನ್ನು ಪಡೆಯಲು ಬಹಳ ಸಹಕಾರಿಯಾಯಿತು.
ಕಾರ್ಯಕ್ರಮದ ಆಯೋಜಕ ರಾದ ಸಂಜಯ್, ದೃತಿ, ನಿಖಿಲ್ ಹಾಗೂ ಅವರ ಇಡೀ ತಂಡ ಬಹಳ ಶ್ರಮ ವಹಿಸಿ ತುಂಬಾ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.