ಟೈಮ್ ಟ್ರಾವೆಲ್ ಅಂಶದ ಮೇಲೆ ಮಾಡಿರೋ ಕನ್ನಡ ಚಿತ್ರಗಳಲ್ಲಿ ನನಗೆ ಹಿತ ಕೊಟ್ಟ ಸಿನಿಮಾ ಮರ್ಫಿ.
ಒಂದಷ್ಟು ನ್ಯೂನತೆ, ಗೊಂದಲ ಸಹಜವಾಗಿಯೇ ಉಳ್ಕೊಂಡಿದೆ. ಆದರೂ ಒಟ್ಟಾರೆಯಾಗಿ ನೋಡಿಸಿಕೊಳ್ಳುವ ಸಿನಿಮಾ.
ಅಲ್ಲಲ್ಲಿ ಸಿನಿಮಾ ಮುಂದಕ್ಕೂ ಹೋಗ್ತಿಲ್ಲ ಹಿಂದಕ್ಕೂ ಹೋಗ್ತಿಲ್ಲ ಅನಿಸೋದು ಹೌದಾದ್ರೂ.. ಅಲ್ಲಿಯೂ ಇರಿಟೇಟ್ ಮಾಡೋದಿಲ್ಲ.
ಅಭಿನಯ, ಸಿನಿಮೆಟೋಗ್ರಫಿ, ಎಡಿಟಿಂಗ್, ನಿರ್ದೇಶನ ಎಲ್ಲದರಲ್ಲೂ ಪಕ್ವತೆ ಸ್ಪಷ್ಟತೆ ಶದ್ಧೆ ಕಾಣುತ್ತೆ. ಅವಧಿಯನ್ನು ಇನ್ನೊಂಚೂರು ಕಮ್ಮಿ ಮಾಡೋ ಅಥವಾ ಸಿನಿಮಾವನ್ನು ಇನ್ನೊಂಚೂರು ವೇಗಗೊಳಿಸೋ ಎಲ್ಲ ಸಾಧ್ಯತೆ ಇತ್ತು. ಅದು ಸಾಧ್ಯವಾಗಿದ್ರೆ ಸಿನಿಮಾ ಇನ್ನೂ ಹೆಚ್ಚು ಆಪ್ತವಾಗ್ತಿತ್ತು. ಕಿರುಕಥೆಯಂತೆ ಭಾಸವಾಗ್ತಿತ್ತು.
ಸಿನಿಮಾ ಒಟ್ಟಾರೆಯಾಗಿ ಇಷ್ಟವಾಯ್ತು. ಅರ್ಥವೂ ಆಯ್ತು.
ಈ ಸಿನಿಮಾ ಹಾಗಾದ್ರೆ ಹಿಟ್ ಆಗತ್ತಾ? ಥೇಟರಲ್ಲಿ ದುಡ್ಡು ಮಾಡತ್ತಾ ಅಂತ ಕೇಳಿದ್ರೆ… ನಮ್ಮ ಪ್ರೇಕ್ಷಕರ ಮನಸ್ಥಿತಿ, ಕನ್ನಡ ಚಿತ್ರರಂಗದ ಪರಿಸ್ಥಿತಿಯ ಆಧಾರದ ಮೇಲೆ ಹೇಳೋದಾದ್ರೆ… ಉಹೂಂ.
ಹೀಗಾದಾಗ ಓಟಿಟಿಯವರು ಸ್ಯಾಟಲೈಟ್ ಅವರು ಖರೀದಿಸ್ತಾರಾ?
ಉಹೂಂ.
ಹಾಗಾದ್ರೆ ಚಿತ್ರದ ಗತಿ ಏನು?
ಹಾಗೋ ಹೀಗೋ ಯಾವುದೋ ಓಟಿಟಿಯಲ್ಲಿ ಪೇ ಪರ್ ವ್ಯೂ ಅಂತಾನೋ ಇನ್ಯಾವುದೋ ಅಗ್ಗದ ವ್ಯವಹಾರದ ಮೂಲಕವೋ ಬರುತ್ತೆ. ಬಂದಾಗ ನೋಡಿದವ್ರು.. ಒಂಥರಾ ಚೆನಾಗಿದೆಯಲ್ಲ.. ಇದು ಥೇಟರಿಗೆ ಬಂದಿದ್ದೇ ಗೊತ್ತಿರಲಿಲ್ಲ.. ಇದ್ಯಾಕೆ ಓಡ್ಲಿಲ್ಲ… ಓಟಿಟಿಲಿ ಅರಾಮಾಗಿ ನೋಡಬಹುದು… ಪಕ್ಕಾ ಓಟಿಟಿ ಸಿನಿಮಾ… ನಾಟ್ ಬ್ಯಾಡ್… ಹಾಗೆ ಹೀಗೆ ಒಂದಷ್ಟು ಕಮೆಂಟ್ ಮಾಡ್ತಾರೆ.. ಇನ್ನು ಕೆಲವರು ಓಟಿಟಿಲಿ ಬಂದಮೇಲೆ ಅದನ್ನ ಟೆಲಿಗ್ರಾಮಲ್ಲಿ ಹುಡುಕಿ ಡೌನ್ಲೋಡ್ ಮಾಡ್ಕೊಂಡು ಫಾರ್ವರ್ಡ್ ಎಲ್ಲ ಮಾಡ್ಕೊಂಡು ನೋಡಿ, ಒಂದು ಅಸಡ್ಡೆಯ ಕಮೆಂಟ್ ಮಾಡ್ತಾರೆ..
ಹಲವಾರು ಅಬೋವ್ ಆವರೇಜ್ ಅಥವಾ ಪ್ರಯೋಗಾತ್ಮಕ ಚಿತ್ರಗಳು ಅವಸಾನವಾಗ್ತಾ ಇರೋದು ಹೀಗೆ.
ವ್ಯವಹಾರ ಗೊತ್ತಿಲ್ಲದ, ಒಳವ್ಯವಹಾರ ಸಾಧ್ಯವಿಲ್ಲದ, ಕಾಂಟ್ಯಾಕ್ಟು ಗಳನ್ನು ಎನ್ ಕ್ಯಾಶ್ ಮಾಡಿಕೊಳ್ಳಲಾಗದ, ನಿರ್ಮಾಪಕರು ಸಿನಿಮಾ ಮಾಡದೇ ಇರೋದೇ ಒಳ್ಳೇದು
Credits: Naveen Sagar